ಆರು ಮುನಿದು ನಮ್ಮನೇನ ಮಾಡುವರು, ವಿಶ್ವಗುರು ಬಸವಣ್ಣನವರ ವಚನದ ವಿಶ್ಲೇಷಣೆ ಲೋಕೇಶ್ ಎನ್ ಮಾನ್ವಿ.

 ಓಂ ಶ್ರೀಗುರುಬಸವಲಿಂಗಾಯ ನಮಃ


ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು
ನಮ್ಮ ಕುನ್ನಿಗೆ ಕೂಸ ಕೊಡಬೇಡ.
ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.
ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,
ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ.



  ✍🏻 -:#ವಿಶ್ವಗುರು_ಬಸವಣ್ಣನವರು.


#ಭಾವಾರ್ಥ-:


ನ್ಯಾಯ ನಿಷ್ಠೂರರಾಗಿ ತತ್ವ ನಿಷ್ಠರಾಗಿ 

ಸತ್ಯ ಸನ್ಮಾರ್ಗದಲ್ಲಿ ನಡೆವ ಶರಣರ ಕಂಡರೆ,

ತತ್ವದ ಸತ್ವಹೀನ ಮನುಜರು ಬೊಗಳುವುದು ಸಹಜ.


ಸಕಲ ದಾಯಮಯರಾದ ಶರಣರ ಕಂಡರೆ,

ಅವರ ಕಾಯಕ ತತ್ವ ದಾಸೋಹತ್ವ ಸಮತೆ ಪ್ರೀತಿ ನ್ಯಾಯ ನಿಷ್ಠೂರತೆಯ ಸದ್ವಿಚಾರಗಳ ಕಂಡು ಲೋಕಲೌಕಿಕದ ಜಡಜೀವಿಗಳೆತ್ತ ಮೆಚ್ಚಿ ನುಡಿವರು.


ಆರು ಮುನಿದು ನಮ್ಮನೇನ ಮಾಡುವರು
ಊರು ಮುನಿದು ನಮ್ಮನೆಂತು ಮಾಡುವರು

ಯಾರು ಮುನಿದರೂ, ನಮ್ಮನ್ನು ಏನೂ ಮಾಡಲಾಗದು
ಸತ್ಯ ಶುದ್ಧ ಕಾಯಕವನ್ನು ಮಾಡುತ್ತ, ಅದರಿಂದ ಬಂದ ಹಣದಲ್ಲಿ ದಾಸೋಹ ಮಾಡುತ್ತ ಜೀವಿಸುತ್ತಿರುವ ಸಮತಾವಾದಿಗಳು ಲೋಕೋಪಕಾರಿಗಳಾದ ಶರಣರನ್ನು ಕಂಡಾಗ ಊರಿನಲ್ಲಿ ಕುಳಿತು ತಿನ್ನುವ ಜಡದೇಹಿಗಳು ಕೊಂಕು ಮಾತನಾಡುವುದು ಸಹಜ,

ಅಂಥ ಜನರಿರುವ ಊರಿಗೆ ಊರೇ ಮನಿದರೂ ನಮ್ಮನ್ನು ಎಂತೂ ಮಾಡಲಾಗದುನಮ್ಮನ್ನು ಅಡ್ಡಿಪಡಿಸಲಾಗದು.


ನಮ್ಮ ಕುನ್ನಿಗೆ ಕೂಸ ಕೊಡಬೇಡ’  ಹೆಚ್ಚೆಂದರೆ ಏನು ಮಾಡುವರು ? ನಮ್ಮ ಮನೆಯ ಮಗನಿಗೆ ತಮ್ಮ ಮಗಳನ್ನು ಕೊಡದಿರಬಹುದು ಅಷ್ಟೆ, ಅಂಥ ಸೋಮಾರಿಗಳ ಸಂಗ ನಮಗೆ ಮೊದಲೇ ಬೇಡವಾದದ್ದು .


ನಮ್ಮ ಸೊಣಗಂಗೆ ತಳಿಗೆಯಲಿಕ್ಕಬೇಡ.

ಇನ್ನು ನಮ್ಮ ಮನೆಯ ಶ್ವಾನಕ್ಕೆ ಅವರು ಅನ್ನವನಿಕ್ಕದಿರಬಹುದಷ್ಟೇ, ಆದರೆ ಪರಮ ದಾಸೋಹಿಗಳಾದ ಶರಣರ ಮನೆಯ ಶ್ವಾನವೂ ಕೂಡ ಸತ್ಯ ಶುದ್ಧವಾಗಿ ದುಡಿಯದ ಸೋಮಾರಿಗಳ ಮನೆಯ ಬೋನವನ್ನು ಎಂದಿಗೂ ಮೂಸಿ ಸಹ ನೋಡದು,.


#ಆನೆಯ ಮೇಲೆ ಹೋಹವನ ಶ್ವಾನ ಕಚ್ಚಬಲ್ಲುದೆ,

ನಮಗೆ ನಮ್ಮ ಕೂಡಲಸಂಗನುಳ್ಳನ್ನಕ್ಕ.


ಆನೆಯು ಬಂದಾಗ ಅದು ನಡೆದದ್ದೇ ದಾರಿ,

ಶ್ವಾನಗಳು ಅದರ ನಡೆಯನ್ನು ಕಂಡು ಬೀದಿಗೆ ಬಂದು ಬೊಗಳುವುದು ಸಹಜ ಮತ್ತು ಸಾಮಾನ್ಯ.

ಹಾಗೆಯೇ ಜಾತಿ_ಮತ_ಪಂಥ, ವರ್ಗ_ವರ್ಣ_ಲಿಂಗ,ವೆಂಬ ಅಂಧ ಶ್ರದ್ಧೆಯ ಅಲ್ಪವಿಷಯಗಳಲ್ಲೇ ಕಚ್ಚಾಡುತ್ತಿರುವ ಲೌಕಿಕದ ಅಜ್ಞಾನಿಗಳ ನಡುವೆ, ಕೂಡಲಸಂಗಮದೇವನೆಂಬ ಕರುಣಾಸಾಗರನ  

ಭಕ್ತಿ_ಜ್ಞಾನ_ಕಾಯಕ_ದಾಸೋಹದ ಸತ್ಯ ಮಾರ್ಗದಲ್ಲಿರುವ ಶಿವಶರಣರನ್ನು ಕಂಡಾಗ ಲೋಕಲೌಕಿಕದ ಅಜ್ಞಾನ ತುಂಬಿದ ಜನಗಳು ಬೊಗಳುವುದು ಸಹಜಆದರೆ ಅದರ ಬಗ್ಗೆ ಯೋಚಿಸಲು ಕೂಡ ಶರಣರಿಗೆ ಕಿಚ್ಚಿತ್ತೂ ಸಮಯವಿಲ್ಲಕಾರಣ ಸತ್ಯಶುದ್ಧವಾದ ನಿತ್ಯಕಾಯಕ, ಅನ್ನ_ಅರಿವು_ಆರ್ಶಯವೆಂಬ ತ್ರಿವಿಧ ದಾಸೋಹದಲ್ಲಿ ಮಗ್ನರಾದ ಶರಣರಿಗೆ ಸ್ತುತಿ ನಿಂದೆಗಳ ಚಿಂತೆಯೂ ಅಲ್ಲ, ಅದರ ಬಗ್ಗೆ ಯೋಚನೆಯೂ ಇಲ್ಲ, ಕಾರಣ ಅದಕ್ಕೆ ತಕ್ಕ ಉತ್ತರ ನೀಡಲು ಕೂಡಲಸಂಗಮದೇವನಿರುವ ತನಕ, ಶರಣರಿಗೆ ಮತ್ತಿನ್ಯಾವ ಭಯವಿಲ್ಲ..

ಎಂಬುದಾಗಿ #ವಿಶ್ವಗುರು_ಬಸವಣ್ಣನವರು ತಿಳಿಸುತ್ತಾರೆ..💐🙏🏻🙏🏻💐




    

                                   ವಿಶ್ಲೇಷಣೆ-: 

            #ಲೋಕೇಶ್_ಎನ್_ಮಾನ್ವಿ.

                -/ 9972536176

Comments

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.