‘ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ’ ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ -; ಲೋಕೇಶ್ ಎನ್ ಮಾನ್ವಿ.🙏🏻

 ಶ್ರೀಗುರುಬಸವಲಿಂಗಾಯನಮಃ



ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ
ಧರೆ ಧನ ವನಿತೆಯರು ಎನ್ನವರು ತನ್ನವರೆಂದು
ಹೋರಿ ಹೋರಿ ಸಾಯುತ್ತಿದೆ ಜೀವ
ಸರ್ವಕರ್ತೃ ಕೂಡಲಚೆನ್ನಸಂಗಯ್ಯನೆಂದರಿಯದೆ..👏👏



✍🏾•ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು🙏



                           ಭಾವಾರ್ಥ-;


ಗುಬ್ಬಿ ಹೆರರ ಮನೆಯ ತನ್ನ ಮನೆ ಎಂಬಂತೆ

ಚಿಲಿಪಿಲಿ ಎಂದು ಹಾಡುತ್ತಾ ಬಂದ ಗುಬ್ಬಚ್ಚಿಗಳು.ತನಗೆ ತನ್ನ ಮರಿಗಳಿಗೆಂದು,

ಒಂದು ಗೂಡು ಮಾಡಿಕೊಳ್ಳಲು ಪ್ರಯತ್ನಿಸುತ್ತಿದ್ದವು,

ಒಂದು ದಿನ ಗಡಿಬಿಡಿಯಲ್ಲಿ ಯಾವುದೊ ಪಾಳು ಬಿದ್ದ ಮನೆಯಲ್ಲೊ ಅಥವಾ ಇನ್ಯಾರೊ ಕಟ್ಟಿದ ಮನೆಯ ಗೋಡೆಯ ಸಂದಿಯಲ್ಲೊ ಗೂಡುಕಟ್ಟಿ, ಆಹಾರ ಸಂಗ್ರಹದಲ್ಲಿ ತೊಡುಗುತ್ತವೆಇತರೆ ಗುಬ್ಬಿಗಳನ್ನು ಕರೆತಂದು  ಮನೆ ತಮ್ಮದೆಂದು ಅತ್ಯಂತ ಗರ್ವದಿಂದ ತೋರ್ಪಡಿಸುತ್ತವೆಒಂದುದಿನ ಎಲ್ಲವೂ ತನ್ನದೆನ್ನುವ ಸಂತಸದಲ್ಲಿ ಕುಳಿತು ಮೈಮರೆತವು ಗುಬ್ಬಿಗಳು.

ಇದನ್ನು ಕಂಡ ಮನೆಯ ಮಾಲಿಕ ಗೋಡೆಯ ಸಂದಿಯನ್ನು ಮುಚ್ಚಿಬಿಡುತ್ತಾನೆ.

ಅದನ್ನೇ ಆಶ್ರಯಿಸಿ  ಕ್ಷಣಿಕವಾದುದ್ದನ್ನು ನಂಬಿ ಎಲ್ಲವೂ ತನ್ನದೆಂದು ಮೈಮರೆತ ಗುಬ್ಬಿಗಳು ಅದರಲ್ಲೇ ಉಳಿದು ಸಾವನ್ನಪ್ಪುತ್ತವೆ.


ಅದರಂತೆ ಜಗತ್ತಿಗೆ ಬಂದ ಮನುಷ್ಯನೂ ಸಹ

ಧರೆ ಧನ ವನಿತೆಯರೆಂದು ಹೋರಿ ಹೋರಿ ಸಾಯುತ್ತಿದೆ ಜೀವ

ಅತ್ಯಂತ ಸ್ವಾರ್ಥದಿಂದ ಅದೂ ನನ್ನದೆಇದು ನನ್ನದೆ,ನನ್ನ ಮನೆ ನನ್ನ ಹೊಲ, ನನ್ನದು ತನ್ನದೆನ್ನುವ ಮಾನವ,

ತಾನು ಬಂದ ಕಾರ್ಯವನ್ನೇ ಮರೆತು ನಿರ್ಧಿಷ್ಟ ಗುರಿಯಿಲ್ಲದೆಹತ್ತು ಹಲವು ಭೌತಿಕ ಆಸ್ತಿಗಳನ್ನು ಗಳಿಸಲು ಪ್ರಯತ್ನಿಸುತ್ತಾನೆ,

ಕೊನೆಗೆ ಏನೆಲ್ಲ ಉಳಿಸಿ ಗಳಿಸಿ ಅನ್ಯರ ಮನವ ನೋಯಿಸಿ ಆಸ್ತಿಗಳನ್ನು ಮಾಡಿಕೊಂಡರೂ ಕೂಡ ಎಲ್ಲವನ್ನೂ ಬಿಟ್ಟು ಬರಿ ಅಸ್ಥಿಯಾಗಿ ಹೋಗಿದ್ದಾನೆ.

ಸಾವಿರ ಸಾವಿರ ವಿಸ್ತಾರದ ಭೂಮಿ ಮಾಡಿಟ್ಟವರು ಬಂಗಾರವನ್ನು ಕೂಡಿಟ್ಟವರು ಕೂಡ 6×3ರಲ್ಲೇ ಬರಿ ಕೈಯಲ್ಲಿ ಹೋಗಿದ್ದಾರೆ.

ಇನ್ನು ಹೆಣ್ಣನ್ನೇ ನೆಚ್ಚಿಅವಳ ಬಾಹ್ಯ ಸೌಂದರ್ಯವನ್ನೆ ಮೋಹಿಸಿ ಕಾಮಿಸಿ ಅದರಲ್ಲೇ ಮಗ್ನರಾದವರು ಕೂಡ ಮಣ್ಣಲ್ಲಿ ಮಣ್ಣಾಗಿದ್ದಾರೆ.


ಸರ್ವಕರ್ತೃ ಕೂಡಲ ಚೆನ್ನಸಂಗಯ್ಯನೆಂದರಿಯದೆ


ಇದಕ್ಕೆಲವಕ್ಕೂ ಮೂಲ ಕಾರಣಸೃಷ್ಟಿಕರ್ತನೆಂಬುದನ್ನೇ ಮರೆತು ಅವನನ್ನೇ ನೆನೆಯದೆ ಬರಿಯ ಭೌತಿಕ ಭ್ರಮೆಯಲ್ಲಿ ಮುಳಿಗಿ ಸಾಯುತ್ತಿದ್ದಾರೆ ಮಾನವ ಜೀವಿಗಳು‌ನಿರಾಕಾರ ದೇವನ ಸ್ವರೂಪವೇ ಆದ,

ಸೃಷ್ಟಿಯ ಪ್ರಕೃತಿಯ ಧರ್ಮವನ್ನು ಒಪ್ಪಿ ಅಪ್ಪಿ ಅದರಂತೆ ಭೂಮಿಯ ಮೇಲೆಲ್ಲವೂ ಸಮಎಲ್ಲರೂ ಸಮಇಲ್ಲಿ ಯಾವುದೂ. ಶಾಶ್ವತವಾಗಿ ಯಾರದ್ದೂ ಅಲ್ಲ.

ಇವೆಲ್ಲವೂ ಸೃಷ್ಟಿಯ ( ಪ್ರಕೃತಿಯ) ಕೊಡುಗೆ ಇದನ್ನು ಮನಗಂಡು, ಜಾತಿ ಧರ್ಮ ವರ್ಗ ವರ್ಣಗಳೆಂಬ ಅಡ್ಡಗೋಡೆ ಕಟ್ಟದೆ,

ನಾನು ನನ್ನದೆನ್ನುವ ಅತೀ ಮೋಹ(ದುಃಖ) ಅಳಿದುಎಲ್ಲರೂ ಸಮಾನರೆಂಬುದನ್ನು ಅರಿತು, ಆನಂದಿಸಿ ಇದೆಲ್ಲದಕ್ಕೂ ಕರ್ತೃ ಅವನೊಬ್ಬನೇ☝🏻 ನಿರಾಕಾರ ಸೃಷ್ಟಿಕರ್ತನು, ಎಂಬುದನ್ನು ಅರಿತು ನಾನು ನನ್ನದೆಬ್ಬ ಭ್ರಮೆಯ(ದುಃಖ)ಬಿಟ್ಟು ಆನಂದದಿಂದ ಅನಂತನ ಸೃಷ್ಟಿಯನ್ನು ಅರಿತು ಶರಣರಾಗಿ ಬದುಕಿ ಬಾಳಿರಿ ಎನ್ನುತ್ತಾರೆ ಚಿನ್ಮಯಜ್ಞಾನಿ ಚೆನ್ನಬಸವಣ್ಣನವರು..👏🏻👏🏻


 

                  🙏🏻ಶರಣು ಶರಣಾರ್ಥಿಗಳೊಂದಿಗೆ🙏🏻

                         ವಿಶ್ಲೇಷಣೆ•

    ✍🏾-;#ಲೋಕೇಶ್_ಎನ್_ಮಾನ್ವಿ.






Comments


  1. ಸುಂದರವಾಗಿ ವಚನ ನಿರ್ವಚನ ಮಾಡಿದ್ದಿರಿ.
    ಬಹಳ ಅರ್ಥಗರ್ಭಿತ ಮನಮುಟ್ಟುವಂತೆ ಮನುಷ್ಯನಾದವನು ಯಾವರೀತಿ ಬದುಕುಸಾಗಿಸಿ, ಇನ್ನೀತರರಿಗೆ ಮಾದರಿಯಾಗಿ ಶರಣ ತತ್ವ ಅಳವಡಿಸಿಕೊಂಡು ನಿಶ್ಚಿಂತೆಯಿಂದ ಮುಂದಿನ ಪಿಳಿಗೆ ದಾರಿದೀಪವಾಗೋಣ..
    ಶರಣುಗಳು
    ಶಿವಪ್ಪ ಸಕ್ರಿ.

    ReplyDelete
    Replies
    1. ಧನ್ಯವಾದಗಳು ಶರಣರೆ,.🙏🏻💐

      ಶರಣು ಶರಣಾರ್ಥಿಗಳು..🙏🏻💞🙏🏻

      Delete

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.