ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

 ಓಂ ಶ್ರೀಗುರುಬಸವಲಿಂಗಾಯ ನಮಃ


ಘನತರವಾದ ಚಿತ್ರದ ರೂಹ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು. ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.



              ✍🏾-;ಅಲ್ಲಮಪ್ರಭುದೇವರು.



                          #ಭಾವಾರ್ಥ-:


ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ

ಅದ್ಭುತ ಅತ್ಯಾಕರ್ಷಕ ಅತೀ ಸುಂದರವಾಗಿ ಕೈಕಾಲು 

ಕಣ್ಣು ಮೂಗ ತಿದ್ದಿ ತೀಡಿ, ಬಾಹ್ಯ ಸೌದರ್ಯದ ಚಿತ್ರವ ಬರೆಯಬಹುದಲ್ಲದೇ. 

ಪ್ರಾಣವ ಬರೆಯಬಹುದೆ ಅಯ್ಯಾ?’

ನೀವು ಎಷ್ಟೇ ಚೆಂದದ ಚಿತ್ರವನ್ನು ಬಿಡಿಸಿದರೂ,

ಎದ್ದು ಬರುವಂತೆ ಬಣ್ಣಗಳ ತುಂಬಿದರೂ ಕೂಡ ಅದಕ್ಕೆ  ಜೀವ ತುಂಬಲಾದೀತೆ .?

ಆಗದು ಚಿತ್ರಕ್ಕೆ ಬಣ್ಣವ ತುಂಬಬಹುದಲ್ಲದೆಪ್ರಾಣವ ತುಂಬಲಾಗದು, ಅದರಂತೆಯೇ…

ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ, ಭಕ್ತಿಯ ಮಾಡಬಹುದೆ ಅಯ್ಯಾ?’

ಶಿಷ್ಯನ ತಲೆಯ ಮೇಲೆ ಕೈಯಿಟ್ಟು

ಹಿರಿಯರು ಹೇಳಿದ ಕ್ರಿಯೆಯಲ್ಲಿ

ಮಂತ್ರಗಳನ್ನು ಶಿಷ್ಯನ ಕಿವಿಯಲ್ಲಿ ಹೇಳಿ,

ದೀಕ್ಷೆಯ ಮಾಡಬಹುದು, ಆದರೆ

ಭಕ್ತಿಯ ಮಾಡಬಹುದೆ,?

ಹೂವಿನ ಗಿಡವನ್ನು ನಡೆಬಹುದಲ್ಲದೆ, ಹೂವಿರದೇ ಪರಿಮಳವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ. 

ಅದರಂತೆಯೇ

ಶಿಷ್ಯನಿಗೆ ದೀಕ್ಷೆಯ ಕೊಡಬಹುದಲ್ಲದೆ,

ಸುಮಧುರ ಭಕ್ತಿಯ ಕೊಡಲಾಗುವುದಿಲ್ಲ.

ಕಾರಣ,

ಪ್ರಾಣವಹ ಭಕ್ತಿಯ ತನ್ಮಯ ನೀನು,

ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ

ಭಕ್ತಿಯು ಪ್ರಾಣದಂತೆ ಅದನ್ನು ಮತ್ತೊಬ್ಬರು ಕೊಡಲಾಗದುಅವನಲ್ಲೇ ಬರಬೇಕಲ್ಲದೆಮತ್ತೊಬ್ಬರು ಮಾಡಲಾಗದು,

ತನ್ನ ಅರಿವಿನಿಂದ ಹುಟ್ಟುವ ಭಕ್ತಿ, ಹೂವಿನೊಳಗೆ ಹುಟ್ಟುವ, ಸುಮಧುರ ಪರಿಮಳದಂತೆ, ಅತ್ಯಧಿಕ ಸವಿ, ಮತ್ತು ಹಿತಕಾರಿಯಾಗಿರುತ್ತದೆ.

ಬಹುಸುಂದರ ಏಕೋ ದೇವನ ಭಕ್ತಿ ಭಾವದಲ್ಲಿ ತನ್ಮಯನಾದ ಭಕ್ತನ, ಅಂತರಾಳವೇ ನಿನ್ನಲ್ಲಿ ತಲ್ಲೀನವಾಗಿ ಸದ್ಭಾವ_ಸದ್ವರ್ತನೆ _ಸದ್ಗುಣವುಳ್ಳವರಲ್ಲಿ ನೀನಿರುವೆಅಂತಲ್ಲದವರಲ್ಲಿ ನೀನಿಲ್ಲ ಗುಹೇಶ್ವರಾ, ಎನ್ನುತ್ತಾರೆ ಅಲ್ಲಮಪ್ರಭು ದೇವರು.👏🏻👏🏻👏🏻




                   •/////ವಿಶ್ಲೇಷಣೆ////•

             ಶರಣು ಶರಣಾರ್ಥಿಗಳೊಂದಿಗೆ

               #ಲೋಕೇಶ್_ಎನ್_ಮಾನ್ವಿ.





Comments

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.