ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.
ಓಂ ಶ್ರೀಗುರುಬಸವಲಿಂಗಾಯ ನಮಃ
ಘನತರವಾದ ಚಿತ್ರದ ರೂಹ ಬರೆಯಬಹುದಲ್ಲದೆ,
ಪ್ರಾಣವ ಬರೆಯಬಹುದೆ ಅಯ್ಯಾ?
ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ,
ಭಕ್ತಿಯ ಮಾಡಬಹುದೆ ಅಯ್ಯಾ?
ಪ್ರಾಣವಹ ಭಕ್ತಿಯ ತನ್ಮಯ ನೀನು. ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ.
✍🏾-;ಅಲ್ಲಮಪ್ರಭುದೇವರು.
#ಭಾವಾರ್ಥ-:
‘ಘನತರವಾದ ಚಿತ್ರದ ರೂಪ ಬರೆಯಬಹುದಲ್ಲದೆ’
ಅದ್ಭುತ ಅತ್ಯಾಕರ್ಷಕ ಅತೀ ಸುಂದರವಾಗಿ ಕೈಕಾಲು
ಕಣ್ಣು ಮೂಗ ತಿದ್ದಿ ತೀಡಿ, ಬಾಹ್ಯ ಸೌದರ್ಯದ ಚಿತ್ರವ ಬರೆಯಬಹುದಲ್ಲದೇ.
‘ಪ್ರಾಣವ ಬರೆಯಬಹುದೆ ಅಯ್ಯಾ?’
ನೀವು ಎಷ್ಟೇ ಚೆಂದದ ಚಿತ್ರವನ್ನು ಬಿಡಿಸಿದರೂ,
ಎದ್ದು ಬರುವಂತೆ ಬಣ್ಣಗಳ ತುಂಬಿದರೂ ಕೂಡ ಅದಕ್ಕೆ ಜೀವ ತುಂಬಲಾದೀತೆ .?
ಆಗದು ಚಿತ್ರಕ್ಕೆ ಬಣ್ಣವ ತುಂಬಬಹುದಲ್ಲದೆ, ಪ್ರಾಣವ ತುಂಬಲಾಗದು, ಅದರಂತೆಯೇ…
‘ದಿವ್ಯಾಗಮಂಗಳು ಹೇಳಿದ ಕ್ರೀಯಲ್ಲಿ ದೀಕ್ಷೆಯ ಮಾಡಬಹುದಲ್ಲದೆ, ಭಕ್ತಿಯ ಮಾಡಬಹುದೆ ಅಯ್ಯಾ?’
ಶಿಷ್ಯನ ತಲೆಯ ಮೇಲೆ ಕೈಯಿಟ್ಟು
ಹಿರಿಯರು ಹೇಳಿದ ಕ್ರಿಯೆಯಲ್ಲಿ
ಮಂತ್ರಗಳನ್ನು ಶಿಷ್ಯನ ಕಿವಿಯಲ್ಲಿ ಹೇಳಿ,
ದೀಕ್ಷೆಯ ಮಾಡಬಹುದು, ಆದರೆ
ಭಕ್ತಿಯ ಮಾಡಬಹುದೆ,?
ಹೂವಿನ ಗಿಡವನ್ನು ನಡೆಬಹುದಲ್ಲದೆ, ಹೂವಿರದೇ ಪರಿಮಳವನ್ನು ನಿರೀಕ್ಷಿಸಲೂ ಸಾಧ್ಯವಿಲ್ಲ.
ಅದರಂತೆಯೇ
ಶಿಷ್ಯನಿಗೆ ದೀಕ್ಷೆಯ ಕೊಡಬಹುದಲ್ಲದೆ,
ಸುಮಧುರ ಭಕ್ತಿಯ ಕೊಡಲಾಗುವುದಿಲ್ಲ.
ಕಾರಣ,
‘ಪ್ರಾಣವಹ ಭಕ್ತಿಯ ತನ್ಮಯ ನೀನು,
ಈ ಗುಣವುಳ್ಳಲ್ಲಿ ನೀನಿಹೆ, ಇಲ್ಲದಲ್ಲಿ ನೀನಿಲ್ಲ ಗುಹೇಶ್ವರಾ’
ಭಕ್ತಿಯು ಪ್ರಾಣದಂತೆ ಅದನ್ನು ಮತ್ತೊಬ್ಬರು ಕೊಡಲಾಗದು, ಅವನಲ್ಲೇ ಬರಬೇಕಲ್ಲದೆ, ಮತ್ತೊಬ್ಬರು ಮಾಡಲಾಗದು,
ತನ್ನ ಅರಿವಿನಿಂದ ಹುಟ್ಟುವ ಭಕ್ತಿ, ಹೂವಿನೊಳಗೆ ಹುಟ್ಟುವ, ಸುಮಧುರ ಪರಿಮಳದಂತೆ, ಅತ್ಯಧಿಕ ಸವಿ, ಮತ್ತು ಹಿತಕಾರಿಯಾಗಿರುತ್ತದೆ.
ಬಹುಸುಂದರ ಏಕೋ ದೇವನ ಭಕ್ತಿ ಭಾವದಲ್ಲಿ ತನ್ಮಯನಾದ ಭಕ್ತನ, ಅಂತರಾಳವೇ ನಿನ್ನಲ್ಲಿ ತಲ್ಲೀನವಾಗಿ, ಈ ಸದ್ಭಾವ_ಸದ್ವರ್ತನೆ _ಸದ್ಗುಣವುಳ್ಳವರಲ್ಲಿ ನೀನಿರುವೆ, ಅಂತಲ್ಲದವರಲ್ಲಿ ನೀನಿಲ್ಲ ಗುಹೇಶ್ವರಾ, ಎನ್ನುತ್ತಾರೆ ಅಲ್ಲಮಪ್ರಭು ದೇವರು.👏🏻👏🏻👏🏻
•/////ವಿಶ್ಲೇಷಣೆ////•
ಶರಣು ಶರಣಾರ್ಥಿಗಳೊಂದಿಗೆ
#ಲೋಕೇಶ್_ಎನ್_ಮಾನ್ವಿ.
🙏🙏🌷
ReplyDeleteಅನಂತ ಶರಣು ಶರಣರತಿಗಳು ಗುರುದೆವ 🙏🏼 🙏🏼 🙏🏼 🙏🏼 🙏🏼
ReplyDeleteallammprabhu vachana
ReplyDeletesuper
ReplyDeletegood
ReplyDelete