ಹದ ಮಣ್ಣಲ್ಲದೆ ಮಡಕೆಯಾಗಲಾರದು. ಶರಣೆ_ಕೇತಲದೇವಿಯವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಶ್ರೀಗುರುಬಸವಲಿಂಗಾಯ ನಮಃ


ಹದ ಮಣ್ಣಲ್ಲದೆ ಮಡಕೆಯಾಗಲಾರದು.
ವ್ರತಹೀನನ ಬೆರೆಯಲಾಗದು.
ಬೆರೆದಡೆ ನರಕ ತಪ್ಪದುನಾನೊಲ್ಲೆ ಬಲ್ಲೆನಾಗಿ, ಕುಂಭೇಶ್ವರಾ.👏


✍🏾-: ಕುಂಬಾರ ಗುಂಡಯ್ಯನವರ ಪುಣ್ಯಸ್ತ್ರೀ ಶರಣೆ_ಕೇತಲದೇವಿವರು.




                                #ಭಾವಾರ್ಥ-;


ಬಸವಣ್ಣನವರ ಸಮಕಾಲೀನ ಶರಣರಾದ

ಕುಂಬಾರ ಗುಂಡಯ್ಯ ಮತ್ತು ಅವರ ಪತ್ನಿ ಕೇತಲದೇವಿ.

ತಮ್ಮ ಮೂಲ ಕಸುಬಾದ ಕುಂಬಾರಿಕೆಯ

ಕಾಯಕವನ್ನೇ ಪೂಜೆಯಾಗಿ‌ಸಿಕೊಂಡವರು 

ಕುಲ ಕಸುಬಿನಲ್ಲೇ ಆಧ್ಯಾತ್ಮಿಕ ಚಿಂತನೆಯನ್ನು ಅಳವಡಿಸಿಕೊಂಡ ಕಾಯಕ ಜೀವಿಗಳಿವರು, ಇಂದು ಇವರದೊಂದು ವಚನದ ಅನುಭಾವವನ್ನು ಸವಿಯೋಣ ಬನ್ನಿ.



‘ಹದ_ಮಣ್ಣಲ್ಲದೆ_ಮಡಕೆಯಾಗಲಾರದು

ಒಂದು ಮಡಕೆ ಮಾಡಬೇಕಾದರೆ 

ಹದವಾದ ಮಣ್ಣು ಬೇಕು,

ಒಂದು ಬದುಕು ಕಟ್ಟಿಕೊಳ್ಳಬೇಕಾದರೆ

ಮೃದುವಾದ ಮನಸ್ಸಿರಬೇಕು,

ಅದು ಎಲ್ಲಾ ಕ್ರಿಯೆಗೂ ಒಗ್ಗಬೇಕು,

ಹದವಾದ ಮಣ್ಣಿಂದ ನೀರು ತುಂಬುವ ಮಡಕೆ, 

ಮನೆ ಬೆಳಗುವ ಪ್ರಣತೆ,

ಸೇರಿದಂತೆ ಹಲವಾರು ವಸ್ತುಗಳನ್ನು ತಯ್ಯಾರಿಸಬಹುದು.

ಆದರೆ ಕ್ರಿಯೆ ತಪ್ಪಿ ಸುಟ್ಟ ಮಡಕೆ ಮರಳಿ ಮತ್ತೆ ಮೃದುವಾಗಿ ಹದವಾಗಲಾರದು.


ಅದರಂತೆ ಶರಣರ ಮುಂದೆ ಮೃದುವಾದ ನಿಷ್ಕಲ್ಮಶ ಮನಸ್ಸಿದ್ದರೆ.

ಅದನ್ನು ತಮ್ಮ ಅರಿವು ಆಚಾರಗಳ ಸಂಗಮದಿಂದ 

ಕ್ರಿಯಾಶೀಲಗೊಳಿಸಿ ಹದವಾದ ಮನಸ್ಸನ್ನು ತಿದ್ದಿ ತೀಡಿ  

ಒಂದು ಸುಂದರ ಶರಣನೆಂಬ ರೂಪ ನೀಡುತ್ತಾರೆ..



‘ವ್ರತಹೀನನ_ಬೆರೆಯಲಾಗದು

ಅದರಂತಲ್ಲದೆ

ಒಮ್ಮೆ ನುಡಿ(ಅರಿವು) ಕಲಿತು

ನಡೆಯಲ್ಲಿ(ಆಚಾರದಲ್ಲಿ) ತಪ್ಪಿದ

 ಅರೆಬೆಂದ ಮಡಕೆಯಂತಹವರಿಗೆ ಮತ್ತೆ ಮರಳಿ ಸಂಸ್ಕಾರ ನೀಡಲಾದು‌,



ಬೆರೆದಡೆ_ನರಕ_ತಪ್ಪದು_ನಾನೊಲ್ಲೆ_ಕುಂಭೇಶ್ವರಾ

ಮೃದು ಮನಸ್ಸಿಲ್ಲದ ನಡೆ ನುಡಿ ತಪ್ಪಿದವರ,

ಮತ್ತೆ ತಿದ್ದಲೋದರೆ ಮಡಕೆ ಒಡೆದು ಚೂರಾಗುವುದು(ಮಾತು ತಪ್ಪಿದವರ) ಬದುಕು ಕೂಡ ಹಾಗೆಯೇ,

ಅದಕ್ಕಾಗಿ ಒಮ್ಮೆ ಮಾಡಿದ ಮಡಕೆ

ಕ್ರಿಯೆ ಮತ್ತು ಸಂಸ್ಕಾರ ತಪ್ಪಿದ ಮನುಷ್ಯನ ಬಾಳು,

ಒಡೆದು ಚೂರಾದರೆ ಅದನ್ನು ಮತ್ತೆ ಮೊದಲಿನಂತೆ ಹದ(ಮೃದುಗೊಳಿಸಿ) ಮತ್ತೆ ಬರಳಿ

ಸಂಸ್ಕಾರಗೊಳಿಸಲಾಗುವುದಿಲ್ಲ ಎಂದು ಎಚ್ಚರಿಸುತ್ತಾರೆ, ಶರಣೆ_ಕೇತಲದೇವಿಯವರು..🙏

           
      ✍🏾ಭಾವಾರ್ಥ ವಿಶ್ಲೇಷಣೆ

                              ಲೋಕೇಶ್_ಎನ್_ಮಾನ್ವಿ.










Comments

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.