‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’

 ಶ್ರೀಗುರು ಬಸವಲಿಂಗಾಯ ನಮಃ

‘ವಿಶ್ವಗುರು ಬಸವಣ್ಣನವರ ವಚನದಲ್ಲಿ ಕಾನೂನು ಮತ್ತು IPC ಸೆಕ್ಷನ್ಸ್’



ಕಳಬೇಡ ಕೊಲಬೇಡ, ಹುಸಿಯ ನುಡಿಯಲು ಬೇಡ,
ಮುನಿಯಬೇಡ, ಅನ್ಯರಿಗೆ ಅಸಹ್ಯಪಡಬೇಡ,
ತನ್ನ ಬಣ್ಣಿಸಬೇಡ, ಇದಿರ ಹಳಿಯಲು ಬೇಡ. 
ಇದೇ ಅಂತರಂಗಶುದ್ಧಿ, ಇದೇ ಬಹಿರಂಗಶುದ್ಧಿ, ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ.

ಮೇಲಿನ ವಚನಕ್ಕೆ ಸಂಬಂಧಿಸಿದಂತೆ ಕಾನೂನಿನ ಅಡಿಯಲ್ಲಿ ಬರುವ ಸೆಕ್ಷನ್ಸ್….👇🏻


೧)ಕಳಬೇಡ, ಕಳ್ಳತನ ಮಾಡಬೇಡ ಇದು ಐಪಿಸಿ ಸೆಕ್ಷನ್- 378ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ.


೨) ಕೊಲಬೇಡ, ಜೀವಹತ್ಯೆ ಮಾಡಬೇಡ ಇದು ಐಪಿಸಿ ಸೆಕ್ಷನ್- 300ರ ಪ್ರಕಾರ ಶಿಕ್ಷಾರ್ಹ  ಅಪರಾಧವಾಗಿದೆ.


೩)ಹುಸಿಯ ನುಡಿಯಲು ಬೇಡ, ಸುಳ್ಳು ಹೇಳಬೇಡ ಇದು ಐಪಿಸಿ ಸೆಕ್ಷನ್ - 415 ಮತ್ತು 420ರ ಪ್ರಕಾರ ಅಪರಾಧವಾಗಿದೆ.


೪)ಮುನಿಯಬೇಡ,

ಇದು ಐಪಿಸಿ ಸೆಕ್ಷನ್ - 319ರ ಪ್ರಕಾರ ಇದು ಇನ್ನೊಬ್ಬರ ಮನಸ್ಸಿದೆ ನೋವುಂಟು (hurt)ಮಾಡುವುದು ಶಿಕ್ಷಾರ್ಹ ಅಪರಾಧವಾಗಿದೆ.


೫)ಅನ್ಯರಿಗೆ ಅಸಹ್ಯಪಡಬೇಡ,

ಇದು ಐಪಿಸಿ ಸೆಕ್ಷನ್- 295, 295A, 296, 297, 298,ರ ಪ್ರಕಾರ ಶಿಕ್ಷಾರ್ಹ ಅಪರಾಧವಾಗಿದೆ


೬) ತನ್ನ ಬಣ್ಣಿಸಬೇಡ,

ಇದು ಐಪಿಸಿ ಸೆಕ್ಷನ್-192, 

ಪ್ರಕಾರ ತನ್ನ ಬಣ್ಣಿಸಿಕೊಂಡು ಸುಳ್ಳು ಸಾಕ್ಷಿ ಹೇಳಿಕೊಳ್ಳುವುದು ಇದು ಅಪರಾಧವಾಗಿದೆ.


೭)ಇದಿರ ಹಳಿಯಲು ಬೇಡ.

ಇದು ಐಪಿಸಿ ಸೆಕ್ಷನ್ -499ರ ಪ್ರಕಾರ ಇದು ಮಾನನಷ್ಟ, ಮೊಕದ್ದಮೆ ಅಪರಾಧವಾಗಿದೆ.


ಈ ಸಪ್ತಸೂತ್ರಗಳನ್ನು ಅಳವಡಿಸಿಕೊಂಡಲ್ಲಿ 

ನಿನಗಾವ ಭಯವಿಲ್ಲ,

ಇದೇ ಅಂತರಂಗಶುದ್ಧಿ,

ಇದೇ ಬಹಿರಂಗಶುದ್ಧಿ ,

ಇದೇ ನಮ್ಮ ಕೂಡಲಸಂಗಮ ದೇವರನೊಲಿಸುವ ಪರಿ, ಎಂದು ಹೀಗೆ ಜಗತ್ತಿನ ಯಾರೂ ಯೋಚಿಸದ ಯೋಜಿಸದ ರೀತಿಯಲ್ಲಿ,

೯೦೦ ವರ್ಷಗಳ ಹಿಂದೆಯೇ ಕಾನೂನು,ಸಂವಿಧಾನ, ಪ್ರಜಾಪ್ರಭುತ್ವ, ಸಮಾನತೆ, ಅರ್ಥಿಕತೆ, ಶಿಕ್ಷಣ, ಜ್ಞಾನ ವಿಜ್ಞಾನದ ಪರಿಕಲ್ಪನೆಯಲ್ಲಿ ಅನುಭವ ಮಂಟಪ ಎಂಬ ಸಂಸತ್ತನ್ನು ರಚಿಸಿ ಅಲ್ಲಿ ಹಲವಾರು ವಿಷಯಗಳನ್ನು ಚರ್ಚಿಸಿ ಪ್ರಸ್ಥಾಪಿಸಿ ಅನುಷ್ಟಾನಕ್ಕೆ ತಂದರು ಬಸವಾದಿ ಶರಣರು,

ಯಾವ ದೇಶದಲ್ಲೂ , ಎಲ್ಲೂ ಕೂಡ, ಯಾವ ಕಾನೂನು ರಚನೆಯಾಗದ ಮುನ್ನವೇ ಈ ರೀತಿಯಲ್ಲಿ ಅತ್ಯಂತ ವೈಜ್ಞಾನಿಕವೂ, ಸರ್ವಕಾಲಿಕ ಸತ್ಯವೂ, ವಾಸ್ತವವೂ ಆದ ವಚನಗಳ ಮೂಲಕ ಜನರಲ್ಲಿ ಜಾಗ್ರತಿ ಮೂಡಿಸಿದ,

ಜಗತ್ತಿನ ಪ್ರಥಮ ಪ್ರಜಾಸತ್ತಾತ್ಮಕ ಚಿಂತಕರು ದಾರ್ಶನಿಕರು ಯಾರೆಂದರೆ, ಅವರೇ  ಭಾರತವನ್ನು ವಿಶ್ವಗುರುವಾಗಿಸಿದ ಮಹಾಮಾನವತಾವಾದಿ,

ವಿಶ್ವಗುರು ಜಗಜ್ಯೋತಿ ಭಕ್ತಿಭಂಡಾರಿ  ಬಸವಣ್ಣನವರು.👏🏻👏🏻👏🏻👏🏻


ಬರಿ ಭಾರತಕ್ಕೆ ಮಾತ್ರವಲ್ಲ , ಇಡೀ ಈ ವಿಶ್ವಕ್ಕೆ ಗುರು, ನಮ್ಮ ಅಣ್ಣಾ ಬಸವಣ್ಣನವರು..🙏🏻🙏🏻💞🙏🏻🙏🏻



           ✍🏾-; ಲೋಕೇಶ್ ಎನ್ ಮಾನ್ವಿ.

Comments

  1. 🙏 ಜಯ ಗುರು ಬಸವೇಶ ಶ್ರೀ ಗುರು ಬಸವೇಶ 🙏

    ReplyDelete
  2. ತುಂಬಾ ಚೆನ್ನಾಗಿ ಮೂಡಿ ಬಂದಿದೆ
    ಅಭಿನಂದನೆ

    ReplyDelete

Post a Comment

Popular posts from this blog

ಬಸವಣ್ಣನವರ ವಚನಗಳು, 1 ರಿಂದ 100

ಅಲ್ಲಮಪ್ರಭುದೇವರ ವಚನದ ಭಾವಾರ್ಥ ವಿಶ್ಲೇಷಣೆ-; ಲೋಕೇಶ್ ಎನ್ ಮಾನ್ವಿಯವರಿಂದ.

ಮಾತೋಶ್ರೀ ಸಜ್ಜಲಗುಡ್ಡದ ಶ್ರೀಶರಣಮ್ಮ ತಾಯಿಯವರ ಕುರಿತ ವಿಶೇಷ ಲೇಖನ-ಲೋಕೇಶ್ ಮಾನ್ವಿಯವರಿಂದ.

ಚೆನ್ನಬಸವಣ್ಣನವರ ವಚನ ವಿಶ್ಲೇಷಣೆ

ಅಣ್ಣಬಸವಣ್ಣನ ಅನುಭವ ಮಂಟಪ- ಕಲ್ಯಾಣ ಕ್ರಾಂತಿ, ಇದು ಕಲ್ಯಾಣ ಫೈಲ್ಸ್, THE KALYANA FILES..🙏🏻😢

ಏನಿ ಬಂದಿರಿ ಹದುಳಿದ್ದಿರೆ, ವಿಶ್ವಗುರು_ಬಸವಣ್ಣನವರ ವಚನ ವಿಶ್ಲೇಷಣೆ-

‘ನಿಜಸುಖಿ ಹಡಪದ ಅಪ್ಪಣ್ಣನವರು’ ವಿಶೇಷ ಲೇಖನ,.👌🙏🏻

ಯುವ ಕಣ್ಮಣಿ Youth icon ಚಿನ್ಮಯಜ್ಞಾನಿ ಚೆನ್ನಬಸವಣ್ಣನವರ ಬಗ್ಗೆ ನಾವು ತಿಳಿದುಕೊಳ್ಳಲೇಬೇಕಾದ ಸಂಗತಿಗಳು,.